25
ಯೋಬನಿಗೆ ಬಿಲ್ದದನ ಉತ್ತರ 
 1 ಬಳಿಕ ಶೂಹ ದೇಶದ ಬಿಲ್ದದನು ಉತ್ತರಕೊಟ್ಟನು: 
 2 “ದೇವರು ಸರ್ವಾಧಿಪತಿ. 
ಎಲ್ಲರೂ ತನ್ನಲ್ಲಿ ಭಯಭಕ್ತಿಯುಳ್ಳವರಾಗುವಂತೆ ಆತನು ಮಾಡುತ್ತಾನೆ. 
ಆತನು ತನ್ನ ಪರಲೋಕರಾಜ್ಯದಲ್ಲಿ ಸಮಾಧಾನವನ್ನು ನೆಲೆಗೊಳಿಸುವನು. 
 3 ಯಾವನೂ ಆತನ ಸೈನ್ಯಗಳನ್ನು ಲೆಕ್ಕಿಸಲಾರನು. 
ಆತನ ಸೂರ್ಯನು ಜನರೆಲ್ಲರ ಮೇಲೆ ಉದಯಿಸುವನು. 
 4 ದೇವರಿಗೆ ಹೋಲಿಸಿದರೆ ಯಾವನೂ ನೀತಿವಂತನಲ್ಲ. 
ಯಾವ ಮನುಷ್ಯನೂ ಪರಿಶುದ್ಧನಾಗಿರಲು ಸಾಧ್ಯವಿಲ್ಲ. 
 5 ದೇವರ ದೃಷ್ಟಿಯಲ್ಲಿ ಚಂದ್ರನು ಸಹ ಪ್ರಕಾಶವಾಗಿಲ್ಲ; 
ನಕ್ಷತ್ರಗಳು ಸಹ ಪರಿಶುದ್ಧವಲ್ಲ. 
 6 ಹೀಗಿರಲು, ಮನುಷ್ಯನು ಎಷ್ಟೋ ಅಪರಿಶುದ್ಧನು! 
ಅವನು ಕೇವಲ ನಿಷ್ಪ್ರಯೋಜಕವಾದ ಹುಳವಿನಂತಿದ್ದಾನೆ!”